ಸಂಘದ ಇತಿಹಾಸ - History
ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಡಬ ಇದರ ಉದ್ಟಾಟನಾ ಸಮಾರಂಭ.
ದಿನಾಂಕ: 01-11-1981 ರಂದು ದಿ|| ಅಚ್ಯುತ್ ಗೌಡ ಪಣೆಮಜಲು ಇವರ ಮನೆಯಲ್ಲಿ ಸೋಗೆ ಮಡಲಿನ ಚಪ್ಪರ ಹಾಕಿ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಡಬ ಇದರ ಉದ್ಟಾಟನಾ ಸಮಾರಂಭ ನೆರವೇರಿತು.
ಸಮುದಾಯ ಭವನ ನಿರ್ಮಾಣದ ಶಂಕು ಸ್ಥಾಪನ ಕಾರ್ಯ.
ದಿನಾಂಕ: 29-09-1984 ರಂದು ಸಮುದಾಯ ಭವನ ನಿರ್ಮಾಣದ ಶಂಕು ಸ್ಥಾಪನ ಕಾರ್ಯವನ್ನು ನೆರವೇರಿಸಲಾಯಿತು.
ಯಾವುದೇ ಚಟುವಟಿಕೆಗಳಿಲ್ಲದೆ ಒಂದಷ್ಟು ನಿಷ್ಕ್ರಿಯ.
ದಿನಾಂಕ: 03-11-1988 ರಲ್ಲಿ ಹೊಸ ಸಮಿತಿಯನ್ನು 1989 ರಿಂದ 2005 ತನಕ ಸಂಘಟನಾತ್ಮಕ ಯಾವುದೇ ಚಟುವಟಿಕೆಗಳಿಲ್ಲದೆ ಒಂದಷ್ಟು ನಿಷ್ಕ್ರಿಯ.
ಕಲ್ಯಾಣ ಮಂಟಪದ ಪ್ರಾರಂಭೋತ್ಸವನ್ನು ನಡೆಸಲಾಯಿತು.
ಅನೇಕ ಏಳು ಬೀಳುಗಳ ನಡುವೆಯ ಕಾಂಕ್ರಿಟ್ ಪಿಲ್ಲರ್ ಗಳನ್ನು ನರ್ಮಿಸಿ ಸೀಮೆಂಟು ಶೀಟುಗಳ ಹೊದಿಕೆಯನ್ನು ಹಾಕಿ ಸೆಗಣಿ ಸಾರಿಸಿದ ನೆಲದಲ್ಲಿ ದಿನಾಂಕ: 11-05-1989ರಂದು ಕಲ್ಯಾಣ ಮಂಟಪದ ಪ್ರಾರಂಭೋತ್ಸವನ್ನು ನಡೆಸಲಾಯಿತು.
ಅಧ್ಯಕ್ಷರನ್ನಾಗಿ ಕೆ ಸೀತಾರಾಮ ಗೌಡ ಕೋಡಿಂಬಾಳ
10-12-2006 ರಂದು ಹಿಂದಿನ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಂಘಕ್ಕೆ ಮತ್ತೇ ಪುನ:ಶ್ಚೇತನ.
ಒಕ್ಕಲಿಗ ಗೌಡ ಸಮುದಾಯ ಭವನ ಉದ್ಘಾಟನೆ ಮಾಡಲಾಯಿತು.
ಶ್ರೀ ಶ್ರೀ ರ್ಮಪಾಲನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಡಿ ವಿ ಸದಾನಂದ ಗೌಡ ಶ್ರೀ
ಸಂಜೀವ ಮಠಂದೂರು, ಶ್ರೀ ಕೆ ಬಿ ಚಿದಾನಂದ ಗೌಡ ಕುರುಂಜಿ ಮುಂತಾದ ಅತಿಥಿ ಗಣ್ಯರ ಸಮ್ಮಖದಲ್ಲಿ ಒಕ್ಕಲಿಗ ಗೌಡ ಸಮುದಾಯ
ಭವನ ಉದ್ಘಾಟನೆ ಮಾಡಲಾಯಿತು.
ನೂತನ ತಾಲೂಕು ಸಮಿತಿ.
ಶ್ರೀ ಸುರೇಶ್ ಗೌಡ ಬೈಲು ಇವರ ನೇತೃತ್ವದ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು.